ಶಿವಮೊಗ್ಗದಲ್ಲಿ ಭರ್ಜರಿ ರೈತ ದಸರಾ

ನಗರದ ಹೊರವಲಯವಾದ ಹಳೇ ಸಕ್ಕರೆ ಕಾರ್ಖಾನೆಯ ಹಿಂಭಾಗದಲ್ಲಿ ಕೆಸರಗದ್ದೆ ಓಟ, ಹಗ್ಗಜಗ್ಗಾಟ, ಅಡಿಕೆ ಸುಲಿಯುವ ಕಾರ್ಯಕ್ರಮವಮ್ನ ರೈತ ದಸರಾ ಅಡಿಯಲ್ಲಿ ಆಯೋಜಿಸಲಾಗಿತ್ತು.

ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಹಮ್ಮಿಕೊಳ್ಳಲಾದ ಈ ಉತ್ಸವದಲ್ಲಿ ಗ್ರಾಮೀಣ ಸೊಗಡನ್ನೂ ಕಾಣಬಹುದಾಗಿದೆ. 

ಅಡಿಕೆ ಸುಲಿಯುವ ಸ್ಪರ್ಧೆ ನಡೆದಿದೆ. ಈ ಸ್ಪರ್ಧೆ 15 ನಿಮಿಷದಲ್ಲಿ ಯಾರು ಹೆಚ್ಚುಅಡಿಕೆಯನ್ನ ಸುಲಿಯುತ್ತಾರೋ ಅವರು ಗೆದ್ದಹಾಗೆಎಂಬುದು ಈ ಪಂದ್ಯದ ನಿಯಮವಾಳಿ, 15 ನಿಮಿಷದಲ್ಲಿ ಎರಡು ವರೆ ಕೆಜಿ ಅಡಿಕೆ ಸುಲಿದ ರೂಪ ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆತಿದೆ.

ಚಿತ್ರ : ಸೂರಿ
ಚಿತ್ರ : ಸೂರಿ

ಅದರಂತೆ ಮಹಿಳೆಯರ ಮತ್ತು ಪುರುಷರ ಹಗ್ಗಜಗ್ಗಾಟ ಪಂದ್ಯವಳಿ ನಡೆದಿದೆ. ಮಹಿಳಾ ಪಂದ್ಯಾವಳಿಯಲ್ಲಿ ಸವಿತಾ ತಂಡ ಪ್ರಥಮ ಬಹುಮಾನ ಗಳಿಸಿದರೆ. ಪುರುಷರ ಪಂದ್ಯಾವಳಿಯಲ್ಲಿ ಆಂಜನೇಯ ತಂಡ ಮೊದಲನೇ ಸ್ಥಾನ ಪಡೆದಿದೆ.

Leave a Reply

Your email address will not be published. Required fields are marked *