ರಕ್ತದಾನದ ಜಾತ್ರೆ!

ಆಯೋಜಿಸಿದ್ದು ರಕ್ತದಾನ ಶಿಬಿರ ನಡೆದಿದ್ದು ಜಾತ್ರೆ!

ಆಯೋಜಿಸಿದ್ದು ರಕ್ತದಾನ ಶಿಬಿರ ಆದರೆ ಈ ಶಿಬಿರ ಜಾತ್ರೆಯಂತೆ ನಡೆದಿರುವುದು ಗಮನಾರ್ಹ. ಇದೊಂದು ಐತಿಹಾಸಿಕ ಕಾರ್ಯಕ್ರಮವೂ ಸಹ ಹೌದು! ಏಕೆಂದರೆ ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಇತಿಹಾಸವನ್ನೇ ಸೃಷ್ಠಿಸಿದೆ ಎಂದರೆ ತಪ್ಪಾಗಲಾರದು!

ಇದೆಲ್ಲಪ್ಪ ಎಂದು ಯೋಚಿಸಬೇಡಿ! ನ.2 ರಂದು ಆರೋಗ್ಯ ರಕ್ಷಾ ಸಮೀತಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಾಗಿನಲ್ಲಿ, ಹೊಗ್ಗ, ಜಕ್ಕಿನಕೊಪ್ಪ ಮತ್ತು ಇವುಗಳ ವ್ಯಾಪ್ತಿಗೆ ಒಳಪಡುವ ಹಲವು ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶಿಕಾರಿಪುರದ ಕಾಗಿನಲ್ಲಿಯ ಪ್ರಾ.ಆ.ಕೇಂದ್ರದಲ್ಲಿ ನಡೆದ ರಕ್ತದಾನ ಶಿಬಿರ ಅಕ್ಷರಶಃ ಜಾತ್ರೆಯಾಗಿ ಪರಿಣಮಿಸಿತ್ತು. ಕಡಿಮೆ ಎಂದರೂ 3000 ಜನ ರಕ್ತದಾನ ನೀಡಲು ಬಂದಿದ್ದರು.

ಅಪವಾದದಂತಿದ್ದ  ಸರ್ಕಾರಿ ಆಸ್ಪತ್ರೆಯನ್ನ ಮಹಿಳೆಯರಿಗಾಗಿ ಮೀಸಲಿಟ್ಟ ಪಿಂಕ್ ಬೂತ್. ಯೋಧರಿಂದ ಉದ್ಘಾಟನೆ, ಬಲೂನ್‌ಗಳಿಂದ ಶೃಂಗಾರಗೊಂಡಿದ್ದ ಆಸ್ವತ್ರೆ, ಅಚ್ಚುಕಟ್ಟಾದ ಪಾರ್ಕಿಂಗ್ ವ್ಯವಸ್ಥೆ, ಶುಚಿ ರುಚಿಯಾದ ಊಟ, ನಾನೋಬ್ಬ ರಕ್ತದಾನಿ ಎಂಬ ಘೋಷವಾಕ್ಯ, ಟೀ ಶರ್ಟ್ ವಿತರಣೆ, ಹುಮ್ಮಸ್ಸಿನಿಂದ ಕಾರ್ಯನಿರ್ವಹಿಸುತ್ತಿದ್ದ ಆರೋಗ್ಯ ಇಲಾಕೆಯ ಸಿಬ್ಬಂದಿಗಳು ಶಿಬಿರದ ಆಕರ್ಷಣೆಯಾಗಿದ್ದವು.

ಈಶಿಬಿರ ದಾಖಲೆಯನ್ನ ಬರೆದಿದೆ ಎಂದರೆ ತಪ್ಪಾಗಲಾರದು. ಬರೋಬ್ಬರಿ ೩೨೩ ಯೂನಿಟ್ಸ್ ರಕ್ತ ಸಂಗ್ರಹಿಸುವುದರ ಮೂಲಕ  ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ನಡೆದಿರುವ ರಕ್ತದಾನ ಶಿಬಿರದಲ್ಲಿ ಈ ಶಿಬಿರ ಗುರುತರ ಹೆಜ್ಜೆಯನ್ನೇ ಇಟ್ಟಿದೆ ಎಂದರೆ ತಪ್ಪಾಗಲಾರದು. ಕಾಗಿನಲ್ಲಿ ಗ್ರಾಮದ ಹೆಮ್ಮೆಯ ಯೋಧ ಶ್ರೀ ಶಾಂತಮೂರ್ತಿ ರಕ್ತದಾನದ ಪುರುಷರ ವಿಭಾಗವನ್ನು ಉದ್ಘಾಟಿಸಿದರೆ ಮಹಿಳೆಯರಿಗೆಂದೇ ಮೀಸಲಾಗಿಟ್ಟಿದ್ದ ಪಿಂಕ್ ಬೂತ್‌ನ್ನು ಗ್ರಾ.ಪಂ. ಅಧ್ಯಕ್ಷ ಶ್ರೀಮತಿ ಸರೋಜಮ್ಮ ಮಂಜಪ್ಪ ಉದ್ಘಾಟಿಸಿದರು

ಜಿ.ಪಂ ಸದಸ್ಯೆ ಶ್ರೀಮತಿ ಮಮತಾ ಸಾಲಿ ಗದಿಗೆಪ್ಪ ತಾ.ಪಂ. ಸದಸ್ಯೆ ಗೀತಾ ರಾಜಪ್ಪ ಒಟ್ಟಾಗಿ ಶಿಬಿರವನ್ನ  ಉದ್ಘಾಟಿಸಿದರು. ವೈದ್ಯಾಧಿಕಾರಿಗಳಾದ ಡಾ||ಅಶೋಕ ಜೆ.ಬಿ ಶಿಬಿರದಲ್ಲಿ ಭಾಗವಹಿಸಿದ್ದರು.  ರಕ್ತದಾನಿಗಳಾದ ಬಿ.ಹೆಚ್.ಈ.ಓ ಶ್ರೀ ವೈ.ಎಮ್. ಪೂಜಾರ್, ಮಂಜುನಾಥ, ಶ್ರೀಸಲ್ಮಾನ್ ಖಾನ್, ಶ್ರೀಮತಿ ಕವಿತಾ ಎ.ಹೆಚ್,  ಶ್ರೀಮತಿ ಮೀನಾಕ್ಷಿ ಸಿ.ಟಿ, ಶ್ರೀಮತಿ ಕವಿತಾ ಕರಿಗೌಡರ್. ಶ್ರೀ ಮಲ್ಲಿಕಾರ್ಜುನ್. ಶ್ರೀ ಜಗದೀಶ್ ಮಲ್ಲಿಕಾರ್ಜುನ್. ಮೇಘರಾಜ್. ಯಶವಂತ. ಪಾಟೇಲ್ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಸರೋಜಬಾಯಿ, ಸುಜಾತಬಾಯಿ, ಜಿಲ್ಲಾ ಡ್ಯಾಪ್ಕೋ ಅಧಿಕಾರಿ ಡಾ|| ನಟರಾಜ್, ತಾಲ್ಲೂಕ್ ಆರೋಗ್ಯಾಧಿಕಾರಿ ಡಾ|| ಚಂದ್ರಪ್ಪ ಎಮ್.ಜಿ. ಡಾ|| ರಾಮ್ ಕುಮರ್, ಡಾ|| ಶಮಂತ್, ಡಾ|| ಚಂದ್ರಕಾಂತ್, ಡಾ|| ಮಂಜುನಾಥ್,ರೋಟಾರಿ ರಕ್ತ ನಿಧಿ,ಸಾಗರ, ಮೇಗ್ಗನ್ ರಕ್ತ ನಿಧಿ ಸಿಬ್ಬಂದಿ ಹಾಗೂ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *